HFI-Human Freedom Index

 2020ರ ಡಿಸೆಂಬರ್ 17 ರಂದು ಪ್ರಕಟವಾದ ಮಾನವ ಸ್ವಾತಂತ್ರ್ಯ ಸೂಚ್ಯಂಕದ ವರದಿಯನ್ವಯ ಭಾರತವು 162 ದೇಶಗಳ ವರದಿಯಲ್ಲಿ 111ನೇ ಸ್ಥಾನ ಪಡೆದಿದೆ.

 ಫ್ರೆಡ್ ಮ್ಯಾಕ್‌ಮೋಹನ್ ಮತ್ತು ಇಯಾನ್ ವಾಸ್‌ಕ್ವೆಜ್ ಅವರು ಈ ವರದಿಯ ಲೇಖಕರಾಗಿದ್ದಾರೆ. ಅಮೆರಿಕಾದ ಥಿಂಕ್‌ಟ್ಯಾಂಕ್ ಕ್ಯಾಟೋ ಇನ್‌ಸ್ಟಿಟ್ಯೂಟ್ ಮತ್ತು ಕೆನಡಾದ ಫೇಜರ್ ಇನ್‌ಸ್ಟಿಟ್ಯೂಟ್‌ ಜಂಟಿಯಾಗಿ ವರದಿ ಪ್ರಕಟಿಸಿವೆ. ಇದು ನಾಗರಿಕ, ಆರ್ಥಿಕ ಮತ್ತು ವೈಯಕ್ತಿಕ ಸ್ವಾತಂತ್ರಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿದೆ. 2019 ರ ವರದಿಯಲ್ಲಿ ಭಾರತವು 94ನೇ ಸ್ಥಾನ ಪಡೆದಿತ್ತು.


 2020ರ ವರದಿಯಲ್ಲಿ ಭಾರತವು ಒಟ್ಟಾರೆ ಬ್ಯಾಂಕಿಂಗ್‌ನಲ್ಲಿ 6.43 ಅಂಕ ಪಡೆದಿದೆ. ವೈಯಕ್ತಿಕ ಸ್ವಾತಂತ್ರದಲ್ಲಿ 6.3 ಅಂಕ, ಆರ್ಥಿಕ ಸ್ವಾತಂತ್ರ್ಯದಲ್ಲಿ 6.56 ಅಂಕ

ಪಡೆದಿವೆ. 


ನ್ಯೂಜಿಲೆಂಡ್, ಸ್ವಿಟ್ಟರ್ಲೆಂಡ್ ಮತ್ತು ಹಾಂಕಾಂಗ್ ದೇಶಗಳು ಈ ಸೂಚ್ಯಂಕದಲ್ಲಿ ಮೊದಲ 3 ಸ್ಥಾನ ಪಡೆದಿವೆ. ಸಿರಿಯಾ ದೇಶವು ವರದಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಭಾರತದ ಪ್ರಮುಖ ನೆರೆಯ ದೇಶ ಚೀನಾವು 129ನೇ ಸ್ಥಾನ ಮತ್ತು ಬಾಂಗ್ಲಾದೇಶವು 139ನೇ ಸ್ಥಾನ ಪಡೆದಿದೆ.
Post a Comment

Previous Post Next Post