ಮೌರ್ಯರು ( 324-180)


    ಮೌರ್ಯ ಸಾಮ್ರಾಜ್ಯವು ಭಾರತದ ಮೊದಲ ಮಹಾನ್ ಸಾಮ್ರಾಜ್ಯವಾಗಿದೆ. ಅವರ ಅಧಿಕಾರದ ಅವಧಿಯಲ್ಲಿ ಅನೇಕ ಸಣ್ಣಪುಟ್ಟ ಸಂಸ್ಥಾನಗಳನ್ನು ಒಟ್ಟುಗೂಡಿಸಿ, ಏಕಚಕ್ರಾಧಿಪತ್ಯದಡಿಯಲ್ಲಿ ತರಲಾಯಿತು. ಮೊದಲ ಬಾರಿಗೆ ಭಾರತ ರಾಜಕೀಯ ಐಕ್ಯತೆಯನ್ನು ಸಾಧಿಸಿತು. ಮೌರ್ಯರು ಭಾರತದ ವಾಯುವ್ಯ ಭಾಗವನ್ನು ವಿದೇಶೀಯರ ಆಳ್ವಿಕೆಯಿಂದ ಮುಕ್ತಗೊಳಿಸಿದ್ದಲ್ಲದೆ ಹಲವಾರು ಶತಮಾನಗಳ ಕಾಲ ಮುಂದುವರೆದ ಏಕರೂಪದಆಡಳಿತ ಜಾರಿಗೆ ತಂದರು. ಚಂದ್ರಗುಪ್ತ ಮೌರ್ಯ ಈ ವಂಶದ ಸ್ಥಾಪಕ. ಪಾಟಲೀಪುತ್ರ (ಇಂದಿನ ಪಾಟ್ನಾ) ಅವರ ರಾಜಧಾನಿಯಾಗಿತ್ತು. ಧರ್ಮಚಕ್ರ ಅವರ ರಾಜ ಲಾಂಛನವಾಗಿತ್ತು.


ಜೈನ ಧರ್ಮದ ಬಗ್ಗೆ ಪ್ರಮುಖ ಪ್ರಶ್ನೆಗಳು

https://www.mahitiloka.co.in/2021/05/blog-post_28.html



ಕರ್ನಾಟಕ ಏಕೀಕರಣ

https://www.mahitiloka.co.in/2021/05/blog-post_27.html



ಕಲ್ಲಿದ್ದಲಿನ ಬಗ್ಗೆ ಪ್ರಮುಖ ಪ್ರಶ್ನೆಗಳು

https://www.mahitiloka.co.in/2021/05/blog-post_26.html



ಮೈಸೂರು ಒಂದು ಮಾದರಿ ರಾಜ್ಯ

https://www.mahitiloka.co.in/2021/05/blog-post_38.html



ಭೂಮಿ ನಮ್ಮ ಜೀವಂತ ಗ್ರಹ

https://www.mahitiloka.co.in/2021/05/blog-post_37.html



ರಾಷ್ಟ್ರಕೂಟರು

https://www.mahitiloka.co.in/2021/05/blog-post_48.html



ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು

https://www.mahitiloka.co.in/2021/05/blog-post_91.html



📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು

📌https://www.mahitiloka.co.in/2021/05/blog-post_20.html




ಕೃಷಿ ವಿಧಗಳು

👉https://tinyurl.com/yf9437kz




ವಾಯುಮಂಡಲದ ರಚನೆ

👉https://tinyurl.com/yj8wkk36





ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು

👉https://tinyurl.com/yj4rzwog



ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ


🙏🙏🙏🙏🙏🙏🙏🙏🙏🙏🙏🙏🙏



OUR SOCIAL LINKS ;-


YOU TUBE :-https://youtube.com/c/SGKKANNADA


TELEGRAM :-https://telegram.me/s/spardhakiran



INSTAGRAM :-https://instagram.com/shoyal2000?utm_medium=copy_link



FACE BOOK :-https://www.facebook.com/SGK-Kannada-112808230846685/



SHARECHAT :-https://b.sharechat.com/s2xoaNCEW7


https://b.sharechat.com/KaG9DabEGcb









ಚಂದ್ರಗುಪ್ತಮೌರ್ಯನ ಮೂಲಕ್ಕೆ ಸಂಬಂಧಿಸಿದಂತೆ ಅನೇಕ


ಸಿದ್ಧಾಂತಗಳಿವೆ.


1. ವಿಶಾಖದತ್ತನ ಮುದ್ರಾರಾಕ್ಷಸ ಚಂದ್ರಗುಪ್ತಮೌರ್ಯನನ್ನು ಮಯೂರ ಸುತನೆಂದು ಕರೆದಿದೆ.


2. ಜೈನ ಸಾಹಿತ್ಯವು ಅವನು ನವಿಲುಗಳನ್ನು ಸಾಕುವ ಅಥವಾ ಮಯೂರ ಪೋಷಕ ಪಂಗಡಕ್ಕೆ ಸೇರಿದವನು ಎಂದು ಹೇಳುತ್ತದೆ.


3. 'ಮೌರ್ಯ' ಎಂಬ ಪದವು ಮಗಧ ಸಾಮ್ರಾಜ್ಯದ ನಂದರಾಜನ ಉಪಪತ್ನಿ ಎನ್ನಲಾದ 'ಮುರಾ' ಎಂಬುವವಳಿಂದ ಉತ್ಪತ್ತಿಯಾಗಿದೆ.


4. ಬೌದ್ಧ ಸಾಹಿತ್ಯ ಮಹಾವಂಶದ ಪ್ರಕಾರ, ಅವನು ಪಿಪ್ಪಲವನವನ್ನು ಆಳುತ್ತಿದ್ದ 'ಮೋರಿಯಾ' ಎಂಬ ಕ್ಷತ್ರಿಯ ಕುಲಕ್ಕೆ ಸೇರಿದವನು. ಅನೇಕ ಇತಿಹಾಸಕಾರರು ಈ ಅಭಿಪ್ರಾಯವನ್ನು ಒಪ್ಪಿದ್ದಾರೆ.


ಅಧಾರಗಳು:


ಮೌರ್ಯರ ಇತಿಹಾಸವನ್ನು ತಿಳಿಯಲು ನಮಗೆ ಸಹಾಯವಾಗಿರುವ ಪ್ರಮುಖ ಆಧಾರಗಳೆಂದರೆ,


1. ಕೌಟಿಲ್ಯನ ಅರ್ಥಶಾಸ್ತ್ರ 

2. ಮೆಗಾಸ್ಥನೀಸನ ಇಂಡಿಕಾ

3. ವಿಶಾಖದತ್ತನ ಮುದ್ರಾರಾಕ್ಷಸ 

4. ಆಶೋಕನ ಶಾಸನಗಳು


5, ಸಾರಕಗಳು


6. ಸಿಲೋನಿನ ಕೃತಿಗಳಾದ ದೀಪವಂಶ ಮತ್ತು ಮಹಾವಂಶ


ಇವನು ಮೌರ್ಯ ಸಾಮ್ರಾಜ್ಯದ ಸ್ಥಾಪಕ, ಆದಾಗ್ಯೂ ಚಂದ್ರಗುಪ್ತಮೌರ್ಯನ ಬಗೆಗೆ ತಿಳಿದಿರುವ ಸಂಗತಿ ತುಂಬಾ ಕಡಿಮೆ, ತಂದೆಯನ್ನು ಕಳೆದುಕೊಂಡಿದ್ದ ಚಂದ್ರಗುಪ್ತಮೌರ್ಯನನ್ನು ತಕ್ಷಶಿಲೆಯ ವಾಹನಾದ ಚಾಣಕ್ಯನು ಕರೆದೊಯ್ದು ಅಗತ್ಯ ಶಿಕ್ಷಣವನ್ನು ನೀಡಿದನು. ಮೌರ್ಯಸಾಮಾಜ್ಯವನ್ನು ಸ್ಥಾಪಿಸುವಲ್ಲಿ ಆತನು ಚಂದ್ರಗುಪ್ತಮೌರ್ಯನಿಗೆ ಸಹಾಯ ಮಾಡಿದನು.


ಪಂಜಾಬ್ ಮತ್ತು ಮಗದಗಳ ದಿಗ್ವಿಜಯ


ಚಾಣಕ್ಯನ ಮಾರ್ಗದರ್ಶನದಡಿಯಲ್ಲಿ ಚಂದ್ರಗುಪ್ತನು ಒಂದು ಬಲಿಷ್ಠ ಸೈನ್ಯವನ್ನು ಕಟ್ಟಿದನು. ಪಂಜಾಬಿನ ಸಣ್ಣ ರಾಜರುಗಳನ್ನು ಸೋಲಿಸಿ ಅದನ್ನು ವಶಪಡಿಸಿಕೊಂಡನು. ಆನಂತರ ಮಗಧ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದನು. ನಂದರ ಕೊನೆಯ ದೊರೆ ಧನನಂದನನ್ನು ಕೊಂದು ಆತನ ಕ್ರೂರ ಆಡಳಿತವನ್ನು ಕೊನೆಗಾಣಿಸಿ, ಮೌರ್ಯ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದನು.


ಸಲ್ಕುಕಪ್‌ನೊಂದಿಗೆ ಯುದ್ಧ


ಅಲೆಕ್ಸಾಂಡರನು ಭಾರತದ ವಾಯುವ್ಯ ಭಾಗಗಳ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿ, ಅವುಗಳನ್ನು ಆಳಲು ತನ್ನ ಪ್ರತಿನಿಧಿಗಳನ್ನು ನೇಮಿಸಿದ್ದನು. ಚಂದ್ರಗುಪ್ತಮೌರ್ಯನು ಅವರನ್ನು ಸೋಲಿಸಿ, ಅವರ ಪ್ರದೇಶಗಳನ್ನು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು. ಆಲೆಗ್ಲಾಂಡರನ ಮರಣಾನಂತರ ಮಧ್ಯ ಏಷ್ಯಾದಲ್ಲಿಯ ಗ್ರೀಕ್ ಸಾಮ್ರಾಜ್ಯಕ್ಕೆ ಸೆಲ್ಯುಕಸ್ ಅಧಿಪತಿಯಾದನು. ಸಾ.ಶ.ಪೂ. 305ರಲ್ಲಿ ಅಲೆಕ್ಸಾಂಡರ್ ಹೊಂದಿದ್ದ ಭಾರತೀಯ ಪ್ರದೇಶಗಳನ್ನು ಮುನ: ವಶಪಡಿಸಿಕೊಳ್ಳಲು ಸಿಂಧೂ ನದಿಯನ್ನು ದಾಟಿ ಬಂದನು. ಚಂದ್ರಗುಪ್ತಮೌರ್ಯ ಆವನನ್ನು ಸೋಲಿಸಿದನು. ಆದ್ದರಿಂದ ಸೆಲ್ಯುಕಸ್ ಚಂದ್ರಗುಪ್ತನೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕಾಯಿತು. ಆದರಂತೆ, ಅವನು ಕಾಬೂಲ್, ಆಫ್ಘಾನಿಸ್ಥಾನ, ಕಾಂದಹಾರ ಮತ್ತು ಬಲೂಚಿಸ್ಥಾನಗಳನ್ನೊಳಗೊಂಡ ವಿಸ್ತಾರವಾದ ಪ್ರದೇಶವನ್ನು ಚಂದ್ರಗುಪ್ತಮೌರ್ಯನಿಗೆ ನೀಡಿದನು. ಚಂದ್ರಗುಪ್ತಮೌರ್ಯನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಟ್ಟನು. ಇದಕ್ಕೆ ಪ್ರತಿಯಾಗಿ ಚಂದ್ರಗುಪ್ತಮೌರ್ಯನು ಯುದ್ಧ ತರಬೇತಿ ಹೊಂದಿದ್ದ 500 ಆನೆಗಳನ್ನು ಅವನಿಗೆ ಬಳುವಳಿಯಾಗಿ ನೀಡಿದನು. ಸೆಲ್ಯುಕಸ್‌ನು ಮೌರ್ಯರೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದಲ್ಲದೇ ಮೆಗಾಸ್ಟನೀಸನನ್ನು ಪಾಟಲೀಪತ್ರಕ್ಕೆ ರಾಯಭಾರಿಯಾಗಿ ಕಳುಹಿಸಿದ್ದನು.


ಚಂದ್ರಗುಪ್ತಮೌರ್ಯನು ಇನ್ನೂ ಅನೇಕ ಸೇನಾ ದಿಗ್ವಿಜಯಗಳನ್ನು ಕೈಗೊಂಡು ಒಂದು ಬೃಹತ್ ಸಾಮ್ರಾಜ್ಯ ಸ್ಥಾಪಿಸಿದನೆಂದು ಹೇಳಲಾಗಿದೆ. ಆದರೆ, ಆ ಎಲ್ಲಾ ದಿಗ್ವಿಜಯಗಳ ಬಗ್ಗೆ ನಾವು ಸ್ಪಷ್ಟ ಚಿತ್ರಣ ಹೊಂದಿಲ್ಲ. ಅದೇ ರೀತಿಯಾಗಿ ಆತನ ಸಾಮ್ರಾಜ್ಯದ ಎಲ್ಲೆಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.


ಜೈನ ಸಂಪ್ರದಾಯದ ಪ್ರಕಾರ, ಚಂದ್ರಗುಪ್ತನು ತನ್ನ ಆಳ್ವಿಕೆಯ ಕೊನೆಯ ದಿನಗಳಲ್ಲಿ ಸಿಂಹಾಸನವನ್ನು ಭದ್ರಬಾಹುವಿನ ಪ್ರಭಾವದಿಂದ ಜೈನಧರ್ಮವನ್ನು ಸ್ವೀಕರಿಸಿದನು. ತನ್ನ ಕೊನೆಯ ದಿನಗಳನ್ನು ಕರ್ನಾಟಕದ ಶ್ರವಣಬೆಳಗೊಳದಲ್ಲಿ ಕಳೆದನು ಮತ್ತು ಸಾಶಪ್: 300ರಲ್ಲಿ 'ಸಲ್ಲೇಖನ'ವನ್ನು ಆಚರಿಸಿ ಪ್ರಾಣತ್ಯಾಗ ಮಾಡಿದನು. ಆತನು ನೆಲೆಸಿದ್ದ ಬೆಟ್ಟವು 'ಚಂದ್ರಗಿರಿ'ಯೆಂದು, ಆತನಿಂದ ನಿರ್ಮಿಸಲ್ಪಟ್ಟ


ತ್ಯಜಿಸಿ, ಜೈನವಿದ್ವಾಂಸ


ದೇವಾಲಯವು 'ಚಂದ್ರಗುಪ್ತ ಬಸದಿ'ಯೆಂದು ಹೆಸರಾಗಿದೆ.

Post a Comment (0)
Previous Post Next Post