ತುರ್ತು ಪರಿಸ್ಥಿತಿಯ ಅಧಿಕಾರಗಳು Powers of Emergency

 
ಸಂವಿಧಾನದ ಭಾಗ 18ರಲ್ಲಿ 352 ರಿಂದ 360ರ ವರೆಗೆ ತುರ್ತು ಪರಿಸ್ಥಿತಿ ಬಗ್ಗೆ ವಿವರಿಸಲಾಗಿದೆ. ಈ ಅಂಶಗಳನ್ನು 1935ರ ಭಾರತ ಸರ್ಕಾರ ಕಾಯ್ದೆಯಿಂದ ಎರವಲು ಪಡೆಯಲಾಗಿದೆ. ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಮೇಲಿನ ಪರಿಣಾಮವನ್ನು ಜರ್ಮನಿಯ ವೈಮರ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ. (ರಾಷ್ಟ್ರಪತಿಗಳ ಅಧಿಕಾರ) ತುರ್ತು ಪರಿಸ್ಥಿತಿಯಲ್ಲಿ 3 ವಿಧಗಳಿವೆ:- 

1) ರಾಷ್ಟ್ರೀಯ ತುರ್ತು ಪರಿಸ್ಥಿತಿ

(ವಿಧಿ 352 ) - 3 ಬಾರಿ ಹೇರಲಾಗಿದೆ. 1962ರ ಭಾರತ-ಚೀನಾ ಯುದ್ಧ, 1971ರ ಭಾರತ-ಪಾಕ್ ಯುದ್ಧ, 1975ರಲ್ಲಿ ಆಂತರಿಕ ತುರ್ತು ಪರಿಸ್ಥಿತಿ, ದೇಶದ ಭದ್ರತೆಗೆ ಧಕ್ಕೆಯಾದಾಗ ಅಥವಾ ಹೊರಗಿನ ಆಕ್ರಮಣದಿಂದ ಧಕ್ಕೆಯಾದಾಗ ಅಥವಾ ದೇಶದೊಳಗೆ ಶಸ್ತ್ರಾಸ್ತ್ರ ಹೋರಾಟದಿಂದ ಕಾನೂನು ಸುವ್ಯವಸ್ಥೆ ವಿಫಲವಾದಾಗ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಒಂದು ತಿಂಗಳೊಳಗೆ ಸಂಸತ್ತಿನ ಎರಡು ಸದನಗಳ ಅನುಮತಿಯನ್ನು ಪಡೆದುಕೊಂಡರೆ ತುರ್ತು ಪರಿಸ್ಥಿಯು 6 ತಿಂಗಳವರೆಗೆ ಮುಂದುವರೆಯುತ್ತದೆ. ಪ್ರತಿ 6 ತಿಂಗಳವರೆಗೆ ಸಂಸತ್ತಿನ ಎರಡು ಸದನಗಳ ಅನುಮತಿ ಪಡೆಯುತ್ತಾ ಅನಿರ್ದಿಷ್ಟ ಕಾಲದವರೆಗೆ ಮುಂದುವರೆಸಬಹುದು.


2) ರಾಜ್ಯ ತುರ್ತು ಪರಿಸ್ಥಿತಿ (ವಿಧಿ 356) ಬಹುಮತವಿಲ್ಲದಿದ್ದಾಗ ಮತ್ತು ಸಂವಿಧಾನ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ. ಈ ಪರಿಸ್ಥಿತಿಯು ಘೋಷಿಸಿದ ಎರಡು ತಿಂಗಳೊಳಗೆ ಸಂಸತ್ತಿನ ಎರಡು ಸದನಗಳ ಅನುಮತಿಯನ್ನು ಪಡೆದುಕೊಂಡರೆ ಗರಿಷ್ಠ 3 ವರ್ಷದವರೆಗೆ ತುರ್ತು ಪರಿಸ್ಥಿತಿ ಘೋಷಿಸಬಹುದು. 


3) ಹಣಕಾಸು ತುರ್ತು ಪರಿಸ್ಥಿತಿ (ವಿಧಿ 360)- ಒಂದು ಬಾರಿಯೂ ಹೇರಿಲ್ಲ. ದೇಶದ ಹಣಕಾಸು ಪರಿಸ್ಥಿತಿ ತೀವ್ರ ಹದಗೆಟ್ಟರೆ ಘೋಷಿಸಲಾಗುತ್ತದೆ.

Post a Comment (0)
Previous Post Next Post