ಭಾರತೀಯ ಸಂವಿಧಾನದಲ್ಲಿ ನಮೂದಿಸಲಾಗಿರುವ ಮೂಲಭೂತ ಹಕ್ಕುಗಳ ರಕ್ಷಕರು ಯಾರು ?


ಎ) ಸರ್ವೋಚ್ಛ ನ್ಯಾಯಾಲಯ 
ಬಿ) ಸಂಸತ್ತು 
ಸಿ) ರಾಷ್ಟ್ರಪತಿ 
ಡಿ) ಸಂವಿಧಾನ (

ಉತ್ತರ: ಸರ್ವೋಚ್ಚ ನ್ಯಾಯಾಲಯ

ವಿವರಣೆ : ಸರ್ವೋಚ್ಛ ನ್ಯಾಯಾಲಯವು ಭಾರತದ ಅತ್ಯುನ್ನತ ನ್ಯಾಯಾಲಯವಾಗಿದ್ದು, ಸಂವಿಧಾನದ ರಕ್ಷಣೆ, ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ಮೊಕದ್ದಮೆಯ ಕೊನೆಯ ಹಂತವಾಗಿದೆ. ಸಂವಿಧಾನದ 143ನೇ ವಿಧಿಯ ಅನ್ವಯ ಆಡಳಿತದಲ್ಲಿ ಗೊಂದಲವುಂಟಾದಾಗ ರಾಷ್ಟ್ರಪತಿಗಳು ಅಟಾರ್ನಿ ಜನರಲ್ ಅವರ ಮೂಲಕ ಸುಪ್ರೀಂಕೋರ್ಟ್‌ನ ಸಲಹೆ ಕೇಳಬಹುದು. ಸಂವಿಧಾನದ 76ನೇ ವಿಧಿಯನ್ವಯ ಭಾರತದಲ್ಲಿ ಅಟಾರ್ನಿ ಜನರಲ್ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಅತ್ಯುನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಆಗಿದ್ದು, ರಾಷ್ಟ್ರಪತಿಗಳು ಇವರನ್ನು ನೇಮಕ ಮಾಡುತ್ತಾರೆ. ಸಂಸತ್ತಿನ ಸದಸ್ಯರಲ್ಲದಿದ್ದರೂ ಕೂಡ ಸಂಸತ್ತಿನ ಎರಡೂ ಸದನಗಳ ಕಲಾಪಗಳಲ್ಲಿ ಭಾಗವಹಿಸಬಹುದು ಮತ್ತು ಸಂಸತ್ತಿನ ಯಾವುದೇ ಸಮಿತಿಯ ಸದಸ್ಯರಾಗಿ ಭಾಗವಹಿಸಬಹುದು. ಆದರೆ ಮತದಾನ ಮಾಡುವಂತಿಲ್ಲ.

Post a Comment

Previous Post Next Post